Treasure Trove

ಕನ್ನಡ ಗಾದೆಗಳು

  1. ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ದೇವರಿಲ್ಲ
  2. ವೇದ ಸುಳ್ಳಾದರೂ ಗಾದೆ ಸುಳ್ಳಾಗದು
  3. ಹಲ್ಲಿದ್ದವನಿಗೆ ಕಡಲೆ ಇಲ್ಲ ಕಡಲೆ ಇದ್ದವನಿಗೆ ಹಲ್ಲಿಲ್ಲ
  4. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು
  5. ಕೈ ಕೆಸರಾದರೆ ಬಾಯಿ ಮೊಸರು
  6. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ
  7. ಮಾತು ಬೆಳ್ಳಿ ಮೌನ ಬಂಗಾರ
  8. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತಾ?
  9. ಮಾತು ಮನೆ ಮುರಿತು ತೂತು ಓಲೆ ಕೆಡಿಸಿತು
  10. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ
  11. ತಾಯಿಯಂತೆ ಮಗಳು ನೂಲಿನಂತೆ ಸೀರೆ
  12. ಹಾಸಿಗೆ ಇದ್ದಷ್ಟು ಕಾಲು ಚಾಚು
  13. ಸಾಲ ಮಡಿಯಾದ್ರು ತುಪ್ಪ ತಿನ್ನು
  14. ಅಂತ್ಯ ನಿಷ್ಠುರಕ್ಕಿಂತ, ಆದಿ ನಿಷ್ಠುರ ಮೇಲು
  15. ಮಾಡಿದ್ದುಣ್ಣೋ ಮಾರಾಯ
  16. ಹಿತ್ತಲ ಗಿಡ ಮದ್ದಲ್ಲ
  17. ತಾಳಿದವನು ಬಾಳಿಯಾನು
  18. ಇದ್ದದ್ದು ಇದ್ದಂಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ದನಂತೆ
  19. ಪಾಪಿ ಸಮುದ್ರ ಹೊಕ್ಕರು ಮೊಣಕಾಲು ಉದ್ದ ನೀರು
  20. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?
  21. ದಾನ ಕೊಟ್ಟಿದ್ ಮರಿಬೇಕು ಸಾಲ ಕೊಟ್ಟಿದ್ ಬರೀಬೇಕು
  22. ತಲೇ ಮೇಲಣ ಬರಹ ಎಲೆಯಿಂದ ಒರೆಸಿದರೆ ಹೋದೀತೇ
  23. ಇದ್ದಾಗ ನವಾಬ ಸಾಬ, ಇಲ್ಲದಾಗ ಫಕೀರ ಸಾಬ
  24. ಉಪ್ಪು ತಿಂದ ಮನೆಗೆ ಎರಡು ಬಗೆಯ ಬೇಡ
  25. ಮನೆಗೆ ಮಾರಿ ಪರರಿಗುಪಕಾರಿ
  26. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
  27. ದೀಪದ ಕೆಳಗೆ ಯಾವತ್ತೂ ಕತ್ತಲೇ
  28. ಬೆಳೆಯುವ ಸಿರಿ ಮೊಳಕೆಯಲ್ಲಿ
  29. ಊರು ಹೋಗು ಅನ್ನುತ್ತೆ ಕಾಡು ಬಾ ಅನ್ನುತ್ತೆ
  30. ಹಂಗಿನರಮನೆಗಿಂತ ಕುಂದಣದ ಗುಡಿಸಲು ಲೇಸು
  31. ಪಾಲಿಗೆ ಬಂದದ್ದು ಪಂಚಾಮೃತ
  32. ದೇವರು ವರ ಕೊಟ್ಟರೂ ಪೂಜಾರಿ ಕೊಡ
  33. ಎಲ್ಲರ ಮನೆ ದೋಸೆನೂ ತೂತೆ
  34. ಗಂಡ-ಹೆಂಡಿರ ಜಗಳ ತಿಂದು ಮಲುಗೊ ವರೆಗೆ
  35. ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ
  36. ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ
  37. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ
  38. ಬೇಲೀನೇ ಎದ್ದು ಹೊಲ ಮೇಯ್ದಂತೆ
  39. ಉಂಡು ಹೋದ ಕೊಂಡು ಹೋದ
  40. ಚಿಂತೆ ಇಲ್ಲದವನಿಗೆ ಸಂತೇಲು ನಿದ್ದೆ
  41. ಎತ್ತು ಏರಿಗೆಳೀತು ಕೋಣ ನೀರಿಗೆಳೀತು
  42. ಗಣೇಶನ ಮಾಡಲು ಹೋಗಿ ಅವರಪ್ಪನ ಮಾಡಿದಂತೆ
  43. ಗೆದ್ದೆತ್ತಿನ ಬಾಲ ಹಿಡಿದ ಹಾಗೆ
  44. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ
  45. ಹೋದ್ಯ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಲಿ
  46. ಹಾಡಿದ್ದೇ ಹಾಡೋ ಕಿಸಬಾಯಿ ದಾಸ
  47. ಹೆತ್ತೋರಿಗೆ ಹೆಗ್ಗಣ ಮುದ್ದು
  48. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ
  49. ಹರಿಯುವ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕೆ?
  50. ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು
  51. ಕಾರ್ಯವಾಸಿ ಕತ್ತೆ ಕಾಲು ಹಿಡಿ
  52. ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರುಷ ಆಯಸ್ಸು
  53. ಬಡವರ ಮನೆ ಊಟ ಚೆನ್ನ ದೊಡ್ಡವರ ಮನೆ ನೋಟ ಚೆನ್ನ
  54. ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ
  55. ಅಳಿಯ ಅಲ್ಲ ಮಗಳ ಗಂಡ
  56. ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ
  57. ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ
  58. ಹಾವು ಸಾಯಬಾರದು ಕೋಲೂ ಮುರೀಬಾರ್ದು
  59. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು
  60. ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ
  61. ಅತಿಯಾದರೆ ಅಮೃತವೂ ವಿಷ
  62. ಹುಟ್ಟು ಗುಣ ಸುಟ್ಟರೂ ಹೋಗೋಲ್ಲ
  63. ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು
  64. ಅತಿ ಆಸೆ ಗತಿ ಕೇಡು
  65. ಬೆಳ್ಳಗಿರೋದೆಲ್ಲ ಹಾಲಲ್ಲ
  66. ಎರಡು ಕೈ ಸೇರಿದ್ರೇನೆ ಚಪ್ಪಾಳೆ
  67. ಶಿವ ಪೂಜೇಲಿ ಕರಡಿಗೆ ಬಿಟ್ಟಂತೆ
  68. ಆರು ಕಾಸು ಕೊಟ್ಟರೆ ಅತ್ತೆ ಕಡೆ ಮೂರು ಕಾಸು ಕೊಟ್ಟರೆ ಸೊಸೆ ಕಡೆ
  69. ಸಂಕಟ ಬಂದಾಗ ವೆಂಕಟರಮಣ
  70. ಕೋತಿ ತಾನು ಕೆಡೋದಲ್ದೆ ವನಾನೆಲ್ಲ ಕೆಡಿಸಿತು
  71. ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ
  72. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ
  73. ಶಂಖದಿಂದ ಬಂದರೇನೇ ತೀರ್ಥ
  74. ಮನಸಿದ್ದರೆ ಮಾರ್ಗ
  75. ತುಂಬಿದ ಕೊಡ ತುಳುಕಲ್ಲ
  76. ಕುಣಿಯಲು ಬಾರದ ನರ್ತಕಿ ನೆಲ ಡೊಂಕು ಅಂದಳಂತೆ
  77. ಅಲ್ಪನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರೀಲಿ ಕೊಡೆ ಹಿಡಿದ
  78. ಇರುಳು ಕಂಡ ಬಾವಿಗೆ ಹಗಲು ಬೀಳ ಬಾರದು
  79. ಮಾಡಿದುಣ್ಣೋ ಮಹರಾಯ
  80. ಹೊಸದರಲ್ಲಿ ಅಗಸ ಗೋಣಿ ಎತ್ತಿ ಎತ್ತಿ ಒಗೆದ
  81. ಯಥಾ ರಾಜ ತಥಾ ಪ್ರಜಾ
  82. ತಾನು ಮಾಡಿದ್ದು ಉತ್ತಮ ಮಗ ಮಾಡಿದ್ದು ಮಧ್ಯಮ ಆಳು ಮಾಡಿದ್ದು ಹಾಳು
  83. ವಿನಾಶ ಕಾಲಕ್ಕೆ ವಿಪರೀತ ಬುದ್ಧಿ
  84. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ
  85. ಮನೆ ಮನೇಲಿ ಮುದ್ದೆ ಮಾರಿ ಗುಡೀಲಿ ನಿದ್ದೆ
  86. ಕೋತಿ ತಿಂದು ಮೇಕೆ ಬಾಯಿಗೆ ಒರೆಸಿತು
  87. ತಾ ಕಳ್ಳ ಪರರ ನಂಬ
  88. ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಂಡ
  89. ಕತ್ತೆ ಎಂದಾದರೂ ಒದ್ದರೆ ಮರಳಿ ನೀನೊದೆಯದಿರದಕೆ
  90. ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ವೇ
  91. ಊಟಕ್ಕಿಲ್ಲದ ಉಪ್ಪಿನಕಾಯಿ
  92. ಊರಿಗೆ ಬಂದವರು ನೀರಿಗೆ ಬರೊಲ್ವೇ
  93. ಅಲ್ಪರ ಸಂಗ ಅಭಿಮಾನ ಭಂಗ
  94. ಒಗ್ಗಟ್ಟನಲ್ಲಿ ಬಲವಿದೆ
  95. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ
  96. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು
  97. ಕೆಟ್ಟು ಪಟ್ಟಣ ಸೇರು
  98. ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ
  99. ಅ೦ಗೈ ಹುಣ್ಣಿಗೆ ಕನ್ನಡಿ ಬೇಕೆ?
  100. ಮನೇಲಿ ಇಲಿ, ಬೀದೀಲಿ ಹುಲಿ
  101. ಕಪ್ಪೆನ ತಕ್ಕಡಿಲಿ ಹಾಕಿದ ಹಾಗೆ
  102. ಗಾಳಿಗೆ ಗುದ್ದಿ ಮೈ ನೋವಿಸಿಕೊ೦ದ ಹಾಗೆ
  103. ಗಾಯದ ಮೇಲೆ ಬರೆ ಎಳೆದ ಹಾಗೆ
  104. ತಾನೂ ತಿನ್ನ, ಪರರಿಗೂ ಕೊಡ
  105. ಕೊಟ್ಟದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ
  106. ಕೈಗೆ ಬ೦ದ ತುತ್ತು ಬಾಯಿಗೆ ಬರಲಿಲ್ಲ
  107. ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತೆ
  108. ದುಷ್ಟರ ಕ೦ಡರೆ ದೂರ ಇರು.
  109. ಕೊ೦ಕಣ ಸುತ್ತಿ ಮೈಲಾರಕ್ಕೆ ಬ೦ದರು
  110. ಜನ ಮರುಳೋ ಜಾತ್ರೆ ಮರುಳೋ
  111. ನಾಯಿ ಬಾಲ ಡೊ೦ಕು
  112. ಅರವತ್ತಕ್ಕೆ ಅರಳು ಮರಳು
  113. ಕುರಿ ಕೊಬ್ಬಿದಷ್ಟು ಕುರುಬನಿಗೇ ಲಾಭ
  114. ಐದು ಬೆರಳು ಒ೦ದೇ ಸಮ ಇದುವುದಿಲ್ಲ
  115. ಅಯ್ಯಾ ಎ೦ದರೆ ಸ್ವರ್ಗ, ಎಲವೋ ಎ೦ದರೆ ನರಕ
  116. ಆರಕ್ಕೆ ಏರಲ್ಲಿಲ್ಲ ಮೂರಕ್ಕೆ ಇಳೀಲ್ಲಿಲ್ಲ
  117. ಕಾಸಿದ್ದರೆ ಕೈಲಾಸ
  118. ಆಕಳು ಕಪ್ಪಾದರೆ ಹಾಲು ಕಪ್ಪೆ
  119. ಕಬ್ಬು ಡೊ೦ಕಾದರೆ ಸಿಹಿ ಡೊ೦ಕೆ
  120. ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯ್ತು
  121. ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ
  122. ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊ೦ಡ೦ತೆ
  123. ಸ೦ಕಟ ಬ೦ದಾಗ ವೆ೦ಕಟರಮಣ
  124.  ಪ್ರತ್ಯಕ್ಷವಾಗಿ ಕ೦ಡರೂ ಪ್ರಮಾಣಿಸಿ ನೋಡು
  125. ರಾತ್ರಿಯೆಲ್ಲಾ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮನಿಗೂ ಸೀತೆಗೂ ಏನು ಸ೦ಬ೦ಧ ಅ೦ದ ಹಾಗೆ
  126. ಕಳ್ಳನ ಮನಸ್ಸು ಹುಳ್ಹುಳ್ಗೆ
  127. ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ
  128. ಬಡವನ ಕೋಪ ದವಡೆಗೆ ಮೂಲ
  129. ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಮುಚ್ಚಿದರಂತೆ
  130. ಹೊರಗೆ ಥಳಕು ಒಳಗೆ ಹುಳಕು
  131. ಕೋತಿ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ
  132. ಇಲಿ ಬ೦ತು ಅ೦ದರೆ ಹುಲಿ ಬ೦ತು ಎ೦ದರು
  133. ಇರಲಾರದೆ ಇರುವೆ ಬಿಟ್ಟುಕೊ೦ಡ ಹಾಗೆ
  134. ಕುರಿ ಕಾಯೋದಕ್ಕೆ ತೋಳವನ್ನು ಕಳಿಸಿದರ೦ತೆ
  135. ಸ೦ಸಾರ ಗುಟ್ಟು, ವ್ಯಾಧಿ ರಟ್ಟು
  136. ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ
  137. ಅ೦ಕೆ ಇಲ್ಲದ ಕಪಿ ಲ೦ಕೆ ಸುಟ್ಟಿತು
  138. ಕ೦ತೆಗೆ ತಕ್ಕ ಬೊ೦ತೆ
  139. ದುಡ್ಡೇ ದೊಡ್ಡಪ್ಪ
  140. ಗಾಳಿ ಬ೦ದಾಗ ತೂರಿಕೋ
  141. ಗೋರ್ಕಲ್ಲ ಮೇಲೆ ನೀರು ಸುರಿದ೦ತೆ
  142. ಮಾಡಿದವರ ಪಾಪ ಆಡಿದವರ ಬಾಯಲ್ಲಿ
  143. ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೇ
  144. ಒಲ್ಲದ ಗ೦ಡನಿಗೆ ಮೊಸರಲ್ಲೂ ಕಲ್ಲು
  145. ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ?
  146. ಮಗೂನೂ ಚಿವುಟಿ ತೊಟ್ಟಿಲು ತೂಗಿದ ಹಾಗೆ
  147. ಅವನು ಚಾಪೆ ಕೆಳಗೆ ತೂರಿದರೆ ನೀನು ರ೦ಗೋಲಿ ಕೆಲಗೆ ತೂರು
  148. ಕಾಸಿಗೆ ತಕ್ಕ ಕಜ್ಜಾಯ
  149. ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದ ಹಾಗೆ
  150. ಆಚಾರ ಹೇಳೋಕೆ ಬದನೆಕಾಯಿ ತಿನ್ನೋಕೆ
  151. ಚೋರ ಗುರುವಿಗೆ ಚಂಡಾಲ ಶಿಷ್ಯರು
  152. ಕಣ್ಣು ಕಟ್ಟಿ ಕಾಡಿಗೆ ಬಿಟ್ಟ ಹಾಗೆ
  153. ಆಪತ್ತಿಗಾದವನೇ ನೆಂಟ
  154. ಕೂತು ತಿನ್ನುವವನಿಗೆ ಕುಡಿಕೆ ಹೊನ್ನು ಸಾಲದು
  155. ದೂರದ ಬೆಟ್ಟ ನುಣ್ಣಗೆ
  156. ಆಸೆಗೆ ಮಿತಿಯಿಲ್ಲ, ಆಕಾಶಕ್ಕೆ ಅಳತೆಯಿಲ್ಲ
  157. ಅಪ್ಪ ಮಾಡಿದ ಪುಣ್ಯ ಮಕ್ಕಳ ಕಾಲಕ್ಕೆ
  158. ಕೂಸು ಹುಟ್ಟೋ ಮುಂಚೆ ಕುಲಾವಿ ಹೊಲೆದರಂತೆ
  159. ಅಂಗೈಯಲ್ಲಿ ಬೆಣ್ಣೆ ಇಟ್ಕೊಂಡು ತುಪ್ಪಕ್ಕೆ ಅಲೆದರಂತೆ
  160. ಕಬ್ಬಿಣ ಕಾದಾಗಲೇ ಬಡಿಯಬೇಕು
  161. ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು
  162. ಕೊಟ್ಟೋನು ಕೋಡಂಗಿ ಇಸ್ಕೊಂಡೋನು ಈರಭದ್ರ
  163. ಸಜ್ಜನರ ಸಂಗ ಹೆಜ್ಜೇನು ಸವಿದಂತೆ
  164. ದೇಶ ಸೇವೆಯೇ ಈಶ ಸೇವೆ
  165. ಶಕ್ತಿಗಿಂತ ಯುಕ್ತಿ ಮೇಲು
  166. ಆಳಾಗಿ ದುಡಿ ಅರಸಾಗಿ ಉಣ್ಣು
  167. ಹುಲಿ ಮುದಿಯಾದರೆ ಹುಲ್ಲು ತಿನ್ನುವುದೆ?
  168. ಅರಸನ ಮುಂದಿರಬೇಡ ಕತ್ತೆಯ ಹಿಂದಿರಬೇಡ
  169. ನಾರಿ ಮುನಿದರೆ ಮಾರಿ
  170. ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ
  171. ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು

Featured Image Courtesy – Google.com

3 replies »

Leave a reply to R J Cancel reply